¡Sorpréndeme!

News Cafe | ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಿಗುತ್ತಾ ಅನುಮತಿ..? | HR Ranganath | Aug 12, 2022

2022-08-12 7 Dailymotion

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ಎಂದು ತೀರ್ಮಾನ ಆಗಿದೆ. ಆದ್ರೆ ಗಣೇಶೋತ್ಸವ ಆಚರಣೆ ಕೂಗು ಮಾತ್ರ ನಿಂತಿಲ್ಲ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕು ಅಂತಾ ಜಿಲ್ಲಾಡಳಿತಕ್ಕೆ ಕೆಲ ಸಂಘಟನೆಗಳು ಮನವಿ ಮಾಡಿವೆ. ಅತಿ ಸೂಕ್ಷ್ಮ ವಿಚಾರ ಆಗಿರೋದ್ರಿಂದ ಸ್ವಾತಂತ್ರ್ಯ ದಿನಾಚರಣೆ ನಂತರ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ಇವತ್ತು ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಸಭೆಯಲ್ಲಿ ಬೆಂಗಳೂರು ಸಚಿವರಿಂದ ಅಭಿಪ್ರಾಯ ವ್ಯಕ್ತವಾಗುವ ಸಾಧ್ಯತೆ ಇದೆ. ಧ್ವಜಾರೋಹಣ ತೀರ್ಮಾನಕ್ಕಿಂತ ಗಣೇಶೋತ್ಸವ ಆಚರಣೆ ಇನ್ನಷ್ಟು ಸೂಕ್ಷ್ಮ ಆಗಿರೋದ್ರಿಂದ ಎಚ್ಚರಿಕೆಯ ಹೆಜ್ಜೆ ಇಡಲು ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಇನ್ನೂ ಮಾಸಿಲ್ಲ. ಹಾಗಾಗಿ ಕಾನೂನು ಸುವ್ಯವಸ್ಥಿತ ಕಾಪಾಡಬೇಕಾದ ಬಹು ದೊಡ್ಡ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದ್ದು, ಅನುಮತಿ ನೀಡಬೇಕಾ..? ಬೇಡ್ವಾ..? ಎಂಬ ಬಗ್ಗೆ ಪೊಲೀಸ್ ಕ್ಲಿಯರೆನ್ಸ್, ಗುಪ್ತ ದಳದ ಅಭಿಪ್ರಾಯ, ಕಾನೂನು ತಜ್ಞರ ಅಭಿಪ್ರಾಯದ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

#publictv #newscafe #hrranganath